ನನ್ನದೊಂದಾಸೆ
ನಮಸ್ಕಾರಗಳು
ನನ್ನ ಪೂರ್ಣ ವಿದ್ಯಾಭ್ಯಾಸ ಆಂಗ್ಲಭಾಷೆಯಲ್ಲಿ ಆಗಿದೆ. ನನ್ನ ವಿಚಾರಗಳೂ ಸಹ ಆಂಗ್ಲಭಾಷೆಯಲ್ಲಿವೆ. ಆದರೆ ನನಗೆ ಅದು ಬೇಡ. ನನ್ನ ಮಾತೃಭಾಷೆಯಾದ ಕನ್ನಡದಲ್ಲಿ ಓದುವುದು ಮತ್ತು ಬರೆಯುವುದು ನನ್ನ ಧಾರಾಳವಾದ ಬಯಕೆಯಾಗಿದೆ.
ಕನ್ನಡದಲ್ಲಿ ಓದುವ ನನ್ನ ವೇಗ ೫೦ ಶಬ್ದ/ನಿಮಿಷವಿದೆ. ವರ್ತಮಾನದಲ್ಲಿ ನಾನು ತೇಜೋ ತುಂಗಭದ್ರ ಕಾದಂಬರಿಯನ್ನು ಓದುತ್ತಿದ್ದೇನೆ.
ನನಗೆ ಮುಂಬರುವ ಕಾಲದಲ್ಲಿ ಅರ್ಥಪೂರ್ಣವಾಗಿ ಭೈರಪ್ಪ ಅವರ ಮತ್ತು ಕುವೆಂಪು ಅವರ ಕೃತಿಗಳನ್ನು ಓದುವ ಹಂಬಲ.
ದಯವಿಟ್ಟು ನನಗೆ ತಮ್ಮ ಅಭಿಪ್ರಾಯಗಳನ್ನು ಹೇಳಿ
Edit: ಸಲಹೆಗಳಿದ್ರೆ ಸಂತೋಷ 😁
u/FaceGreat2625 — 8 days ago