u/pra7373

Searching for a book

Hi all

I am searching for 'the forest' book by ' jeyamohan' translated from Tamil ( original title kaadu) . it's published in 2009

If anyone comes across this let me know. I can't read Tamil so wanted to read the English translation

reddit.com
u/pra7373 — 8 days ago

One million footsteps - jeyamohan/ v iswarya

​

ಜೆಯಮೋಹನ್ ಕೃತಿಗಳೆಂದರೆ ಯಾವತ್ತಿಗೂ ವಿಶೇಷವೇ. ಇಪ್ಪತ್ತಾರು ಸಂಪುಟಗಳಲ್ಲಿ ಬಂದ ಮಹಾಭಾರತದ ಕತೆಯ ' ವೆನ್ಮರಸು' , ನಾವು ಯಾರಿಗೂ ಗೊತ್ತೇ ಇರದ ಭಿಕ್ಷುಕರ ಜಗತ್ತಿನ ' ತಳಾತಳ' , ಸಣ್ಣದಾದರೂ ಬಹಳ ಕಾಲ ಕಾಡುವ ' ನೂರು ಸಿಂಹಾಸನಗಳು', ಅವರ ಕೆಲವು ಕತೆಗಳ ಅನುವಾದ ' ಆನೆ ಡಾಕ್ಟರ್ ಮತ್ತು ಇತರ ಕತೆಗಳು' ಪ್ರತಿಯೊಂದೂ ವಿಶಿಷ್ಟವೇ. ಕೇರಳ ಮೂಲದ ತಂದೆ ತಾಯಿ ಇಬ್ಬರನ್ನೂ ‌ಕಳೆದುಕೊಂಡು ಆತ್ಮಹತ್ಯೆಗೆ ಎಳಸಿ ಕುಂಬಳೆ ರೈಲ್ವೆ ನಿಲ್ದಾಣದಲ್ಲಿ ನಿಂತ ಅವರ ಹೃದಯಬೇಧಕ ಕತೆಯುಳ್ಳ ' ಆಫ್ ಮೆನ್, ವಿಮೆನ್ ಆ್ಯಂಡ್ ವಿಚಸ್' ಇವೆಲ್ಲವೂ ವಿಶಿಷ್ಟ ಬಗೆಯ ಬರಹಗಳು. ನಮಗೆ ಕನ್ನಡಿಗರಿಗೆ ಅಥವಾ ಇಂಗ್ಲಿಷ್ ಅಲ್ಲಿ ಓದಲು ಬಯಸುವವರಿಗೆ ಅವರ ' ವೆನ್ಮರಸು' , ' ವಿಷ್ಣುಪುರಂ' ಇತ್ಯಾದಿ ಕೃತಿಗಳು ತಮಿಳಿನಲ್ಲಿ ಮಾತ್ರ ಲಭ್ಯ ಇರುವುದು ನಿರಾಸೆಯ ಸಂಗತಿ. ಆದರೆ ಈಗೀಗ ಅವರ ಕೃತಿಗಳ ಇಂಗ್ಲಿಷ್ ಅನುವಾದ ಬರುತ್ತಿರುವುದು ಖುಷಿಯ ಸಂಗತಿ. ಹಾಗಾಗಿ ಈ ಪುಸ್ತಕ ಬಂದ ಕೂಡಲೇ ಓದ ಹೊರಟೆ.

ಇದು ಅವರ ಇತರ ಕೃತಿಗಳ ಹಾದಿಯದಲ್ಲ. ಹೇಳಲು ಒಬ್ಬ ನಿವೃತ್ತ ಪೋಲಿಸ್ ಅಧಿಕಾರಿ ಕುಡಿತದ ಸಂಜೆಗಳಲ್ಲಿ ರಂಗೇರಿರುವ ಹೊತ್ತಲ್ಲಿ ಗೆಳೆಯರ ಜೊತೆ ಕೂತು ರಸಮಯವಾಗಿ ಹೇಳಿದ ಕತೆಗಳ ಹಾಗೆ ಕಂಡರೂ ಆಳದಲ್ಲಿ ಅವರ ಬರಹಗಳ ಮೂಲ ಮನುಷ್ಯ ಸ್ವಭಾವಗಳ ಕುರಿತಾದದ್ದೇ.

ಅದರಲ್ಲೂ ಇಲ್ಲಿರುವ ಕತೆಗಳಲ್ಲಿ ಎರಡು ಕತೆಗಳು ಮಂಗಳೂರು ಪರಿಸರದ್ದು.

ನಾಲ್ಕೂ ಕತೆಗಳ ಪರಿಸರ ವಿಭಿನ್ನ. ಸರ್ಕಸ್‌ನಲ್ಲಿ ಗುರಿಯಿಟ್ಟು ತಲೆಯ ಮೇಲಿಂದ ಆ್ಯಪಲ್ ಹಣ್ಣು ಎಗರಿಸುವ ಗುರಿಕಾರನ ಕತೆಯ ಚಾಣಾಕ್ಷತನ, ನೇತ್ರಾವತಿಯ ತೀರಕ್ಕೆ ಬಂದ ಶವದ ಕೈಯಲ್ಲಿ ಇದ್ದ ರೇಷ್ಮೆಯ ಎಳೆಯ ಜಾಡು, ಶಪಿತ ರಾಜಮನೆತನವೊಂದರ ಸದಸ್ಯರ ದುರಂತ ಅಂತ್ಯದ ಹಿಂದಿನ ಅಪರಾಧದ ಕತೆ,

ಕೊಲೆಯ ಕೇಸಿನ ಹಿಂದೆ ಬಿದ್ದು ಅದು ಕೊನೆಗೆ ತನಿಖಾಧಿಕಾರಿಯ ಬುಡಕ್ಕೇ ಬಂದು ನಿಲ್ಲುವ ಮತ್ತು ಎದೆ ನಡುಗಿಸುವ ಭಾವುಕ‌ ಕೊನೆಯುಳ್ಳ ಕತೆ

ಮತ್ತು ಕೊನೆಯ ಕತೆ ಸಾಮಾನ್ಯ ಚೈನ್ ಸ್ನಾಚಿಂಗ್ ಕೇಸ್ ಒಂದು ತೆಗೆದುಕೊಂಡ ಅಚ್ಚರಿಯ ತಿರುವುಗಳು ಅದರ ಆಳದ ಭಾವುಕ ನೆಲೆ ಇದನ್ನು ಸಾಮಾನ್ಯ ಕ್ರೈಮ್ ಕತೆಗಳಿಂದ ಬಹಳ ಮೇಲಕ್ಕೆ ಏರಿಸುತ್ತದೆ.

ಅದಲ್ಲದೆ ಇಲ್ಲಿ ಬರುವ ಸಂಭಾಷಣೆಗಳ ನೈಜತೆ ' ಆ ಕುಡಿಯದವನನ್ನು ಹತ್ತಿರ ಕೂರಿಸಬೇಡಿ. ಅವನು ಕುಡಿಯುವುದಿಲ್ಲ‌ ಆದರೆ ಕುಡಿಯುವವರ ಸೈಡ್ ಡಿಶ್ ಎಲ್ಲಾ ಖಾಲಿ ಮಾಡ್ತಾನೆ' ಎಂಬ ಸಂಭಾಷಣೆಗಳೆಲ್ಲ‌ ನಾವೂ ಕೇಳಿರುವಂತಹದ್ದೇ.

ಇದು ಬರಿಯ ಕ್ರೈಮ್ ಕತೆಗಳಲ್ಲ. ಒಂದೊಂದು ಕತೆಯೂ ದಕ್ಷಿಣದ ಒಂದೊಂದು ರಾಜ್ಯಗಳ ಇತಿಹಾಸದ ತುಣುಕೂ, ರಾಜಮನೆತನಗಳ ರಕ್ತಸಿಕ್ತ ಇತಿಹಾಸ, ಶಾಪಗಳೂ, ನಂಬಿಕೆಗಳೂ ,ಮಾನವ ಸಹಜ ದೌರ್ಬಲ್ಯಗಳನ್ನು ‌ತೋರಿಸುವ ಬಗೆ ಇಷ್ಟವಾಗುತ್ತದೆ.

ಜೆಯಮೋಹನ್ ನೀವು ಓದಬೇಕಾದ ಲೇಖಕ.

u/pra7373 — 9 days ago