ಕಾಮಣ್ಣನ ಜವಾರಿ ಹಾಡು
ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಹೋಳಿ ಹಬ್ಬದ ಹಿಂದಿನ ದಿನ ಆಚರಿಸುವ ಕಾಮದಹನದ ಕಾಮಣ್ಣ ಹಬ್ಬದ ಈ ಸಾಲುಗಳನ್ನು ಕಿರಿಯರು ಮನೆಮನೆಗೂ ಹೋಗಿ ಚಂದ ಎತ್ತುವ ಸಮಯದಲ್ಲಿ ಹಾಡುತ್ತಿದ್ದರು. ಈಗಲೂ ಈ ಸಂಪ್ರದಾಯ ಇದೆಯೋ ಇಲ್ವೋ ಎಂದು ನನಗೆ ತಿಳಿದಿಲ್ಲ. ಕಿರಿಯರು ಹಿರಿಯರ ಮುಂದೆ ಭಯವಿಲ್ಲದೆ ಅಶ್ಲೀಲ ಪದಗಳನ್ನು ಉಪಯೋಗಿಸುತ್ತಿದ್ದ ಒಂದೇ ಒಂದು ಸಂದರ್ಭ ಇದು. ಈ ಸಾಲುಗಳು ಅನೇಕ ದಕ್ಷಿಣ ಕನ್ನಡಿಗರಿಗೆ ತಿಳಿದಿಲ್ಲ ಎಂಬುದು ನನ್ನ ಊಹೆ.
ಹಾಡು:-
ಕಾಮಣ್ಣ ಮಕ್ಕಳೇ,
ಕಳ್ಳೆಸೂಳೇ ಮಕ್ಕಳೇ,
ಭೀಮಣ್ಣ ಮಕ್ಕಳೇ,
ಬಿಟ್ಟಿಸುಳೆ ಮಕ್ಕಳೇ,
ಐದೇ ಕೊಳ್ಳು ಆರೇ ಕಟ್ಟಿಗೆ,
20 ರೂಪಾಯಿ ರೊಕ್ಕ,
ಕೊಡ ತಂಕ ಬಿಡಲ್ಲಪ್ಪೋ (ಎಲ್ಲರೂ ಬಾಯಿ ಬಾಯಿ ಬಡ್ಕೊಳ್ಬೇಕು) ×3